
ಮಂಗಳೂರು: ಲ.ಅನಿಲ್ ದಾಸ್ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2025 ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.


ಸಮಾಜ ಸೇವೆ, ಶೈಕ್ಷಣಿಕ, ಧಾರ್ಮಿಕ ಸಾಮಾಜಿಕ ಸೇವೆಯಗಳಲ್ಲಿ ಮುಂಚೂಣಿಯಲ್ಲಿರುವ ಲ.ಅನಿಲ್ ದಾಸ್ ರವರು ದಾಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಸಿ, ವಯಸ್ಕರ ಸೇವಾ ಕಾರ್ಯಗಳಲ್ಲಿ ಕರ್ನಾಟಕದಲ್ಲೆ ಮೊದಲ ಸ್ಥಾನ ಪಡೆದಿದೆ.
ನಾಳೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇವರ ಸಾಧನೆಗಳು

ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಎಂಬ ನರ್ಸಿಂಗ್ ಸೇವಾ ಸಂಸ್ಥೆಯ ಮೂಲಕ ಹಲವಾರು ನಿರುದ್ಯೋಗಿ ಯುವಕ – ಯುವತಿಯರಿಗೆ ಕರ್ನಾಟಕದಾದ್ಯಂತ ಉದ್ಯೋಗ ವನ್ನು ಕಲ್ಪಿಸಿದ್ದಾರೆ .ದಾಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಸಮಾಜ ಮುಖಿ ಸೇವೆಗಳನ್ನು ಕಳೆದ 13 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ.
ದಾಸ್ ಓಲ್ಡ್ ಏಜ್ ಹೆಲ್ತ್ ಕೇರ್ ಎಂಬ ವಯೋ ವೃದ್ಧ ರ ಸೇವಾಶ್ರಮ ವನ್ನು ನಡೆಸಿಕೊಂಡು ಹಲವಾರು ವೃದ್ಧರ ಸೇವೆಯನ್ನು ಸಮಾಜದ ಚಿಂತನೆ ಯೊಂದಿಗೆ ಮಿತ ದರದಲ್ಲಿ ಮಾಡಿಕೊಂಡು ಬಂದಿರುತ್ತಾರೆ. ಹಾಗೂ ಲಯನ್ಸ್ ನಲ್ಲಿ ಕಳೆದ 10 ವರ್ಷಗಳಿಂದ ಸಮಾಜಮುಖಿ ಸೇವೆಯಲ್ಲಿ ತನ್ನದೇ ಕೊಡುಗೆಯನ್ನು ನೀಡಿಕೊಂಡು ಬಂದಿರುತ್ತಾರೆ. ಹಾಗೂ ಹತ್ತು ಹಲವಾರು ಸಂಘ ಸಂಸ್ಥೆಗಳಿಗೆ ತನ್ನದೇ ಜವಾಬ್ದಾರಿ ಯೊಂದಿಗೆ ಕೊಡುಗೆ ಸಹಕಾರವನ್ನು ನೀಡುತ್ತಾ ಬಂದಿರುತ್ತಾರೆ.
ಪ್ರಸ್ತುತ ಕುಲಾಲ ಕುಂಬಾರ ಯುವ ವೇದಿಕೆ ಇದರ ಜಿಲ್ಲಾಧ್ಯಕ್ಷರಾಗಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾಗಿ, ಕೊರಗಜ್ಜ ಸೇವಾ ಸಮಿತಿ ಅಂಬಿಕಾ ರೋಡ್ ಇದರ ಅಧ್ಯಕ್ಷ ರಾಗಿ ಹತ್ತು ಹಲವು ಸಂಸ್ಥೆ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ

ಇವರ ಈ ಸೇವೆಗೆ ಕರ್ನಾಟಕ ಸರ್ಕಾರವು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಅನಿಲ್ ದಾಸ್ ರವರ ಅಭಿಮಾನಿಗಳಿಗೆ ಸಂತಸ ತಂದಿದೆ.

