
Read Time:1 Minute, 20 Second
ಮಂಗಳೂರು: ಹಿಂದೂ ಸಂಘಟನೆಯ ಮುಂಚೂಣಿಯಲ್ಲಿರುವ ಅಕ್ಷಯ್ ರಾಜ್ಪುತ್ ಅವರ ವಾಟ್ಸ್ಯಾಪ್ ನಂಬರ್ (+91 9148949324) ಅನ್ನು ವಾಟ್ಸ್ಯಾಪ್ ಕಂಪನಿಯು ಶಾಶ್ವತವಾಗಿ ರದ್ದುಪಡಿಸಿದೆ ಎಂದು ವರದಿಯಾಗಿರುತ್ತದೆ.


ಸುಮಾರು ಹತ್ತು ವರ್ಷಗಳಿಂದ ನಿರಂತರವಾಗಿ ಬಳಸುತ್ತಿದ್ದ ಈ ನಂಬರನ್ನು ಕಂಪನಿಯು ತನ್ನ ನೀತಿ ಹಾಗೂ ನಿಯಮಗಳಿಗನುಗುಣವಾಗಿ ಸ್ಥಗಿತಗೊಳಿಸಿದೆ ಎಂದು ವಾಟ್ಸ್ಯಾಪ್ ಮೂಲಗಳು ತಿಳಿಸಿವೆ.
ಅಕ್ಷಯ್ ರಾಜ್ಪುತ್ ಅವರು ಇತ್ತೀಚೆಗೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಜಿಲ್ಲೆಯ ಮಟ್ಟದಲ್ಲಿ ಹಿಂದೂ ಸಂಘಟನೆಯ ಗಡಿಪಾರದ ಪ್ರಮುಖರಲ್ಲಿ ಒಬ್ಬರು. ಈ ಹಿನ್ನೆಲೆ ಅವರ ಖಾತೆ ರದ್ದುಗೊಂಡಿರುವುದು ಸಾಮಾಜಿಕ ವಲಯದಲ್ಲಿ ಹಲವಾರು ಚರ್ಚೆಗಳಿಗೆ ಕಾರಣವಾಗಿದೆ.


ಜನರ ಸಂಪರ್ಕ ಪಟ್ಟಿಯಲ್ಲಿದ್ದ ಈ ನಂಬರಿನ ರದ್ದುಪಡಿಕೆ, ಹಿಂದೂತ್ವದ ಚಟುವಟಿಕೆಗಳಲ್ಲಿ ತೊಡಗಿರುವ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ “ಟಾರ್ಗೆಟಿಂಗ್” ಕ್ರಮದ ಭಾಗವಲ್ಲವೇ ಎಂಬ ಪ್ರಶ್ನೆ ಎದ್ದಿದೆ


