
ವಿಟ್ಲ: ಲಂಚದ ಬೇಡಿಕೆ ಇಟ್ಟು ಮಂಗಳೂರು ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿ ಇದೀಗ ಬಿಡುಗಡೆಗೊಂಡು ಅಧ್ಯಕ್ಷ ಸ್ಥಾನದಲ್ಲಿ ಮತ್ತೆ ಮುಂದುವರಿದಿರುವ ಒಂದನೇ ಆರೋಪಿ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ನಫೀಸರವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಪತ್ರಿಕಾಗೋಷ್ಠಿ ನಡೆಯಿತು.


’ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರು ಮಾತನಾಡಿ ’ಸಣ್ಣ ನೀರಾವರಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದಿಂದ ಪೆರುವಾಯಿ ಮತ್ತು ಮಾಣಿಲ ಗ್ರಾಮದ ಕೃಷಿಕ ವರ್ಗದ 30 ಕುಟುಂಬಗಳು ಉಚಿತ ಯೋಜನೆಗೆ ಆಯ್ಕೆಯಾಗಿದೆ. ಪೆರುವಾಯಿ ಗ್ರಾಮ ಪಂಚಾಯತ್ ನಾ ಅಧ್ಯಕ್ಷರಾದ ನಫೀಸರವರು ಕೊಳವೆಬಾವಿ ಕೊರೆಯಲು ಪ್ರತೀ ಫಲಾನುಭವಿಯಿಂದ ತಲಾ 10 ಸಾವಿರ ರೂಪಾಯಿಯಂತೆ ಒಟ್ಟು 3 ಲಕ್ಷ ರೂಪಾಯಿಗಳ ಬೇಡಿಕೆಯನ್ನು ಇಟ್ಟು ಹಲವಾರು ಬಡ ಫಲಾನುಭವಿಗಳಿಂದ ಹಣವನ್ನು ಪಡೆದು ವಂಚಿಸಿದ್ದಾರೆ. ಸರಕಾರದಿಂದ ಉಚಿತವಾಗಿ ಕೊಳವೆಬಾವಿ ಸಿಗುವ ಬಗ್ಗೆ ಮಾಹಿತಿ ಕೇಳಿ ತಿಳಿದಿರುವ 75 ವಯಸ್ಸಿನ ವೃದ್ಧ ಫಲಾನುಭವಿ ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿ ಅಧ್ಯಕ್ಷೆ ನಫೀಸರವರ ವಿರುದ್ಧ ದೂರು ದಾಖಲಿಸಿರುತ್ತಾರೆ. ದೂರು ದಾಖಲಿಸಿಕೊಂಡು ದಿನಾಂಕ 6/9/2025 ರಂದು ಮಂಗಳೂರು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಚರಣೆ ಮಾಡಿ ಹಣದ ಬೇಡಿಕೆ ಇಟ್ಟ ಒಂದನೇ ಆರೋಪಿ ನಫೀಸರವರನ್ನು ಹಾಗೂ ಅಧ್ಯಕ್ಷರ ಸೂಚನೆ ಮೇರೆಗೆ ಲಂಚದ ಹಣವನ್ನು ಸ್ವೀಕರಿಸಿದ ಎರಡನೇ ಆರೋಪಿ ವಿಲಿಯಂ ರವರನ್ನು ಗ್ರಾಮ ಪಂಚಾಯತ್ ನಲ್ಲಿ 10 ಗಂಟೆಗೂ ಹೆಚ್ಚಿನ ಸಮಯ ತನಿಖೆ ಮಾಡಿ ಪ್ರಕರಣ ದಾಖಲು ಮಾಡಿ ಬಂಧಿಸಿ 14 ದಿನಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿರುತ್ತಾರೆ. 20/9/2025 ರಂದು ಜಾಮೀನಿನ ಮೂಲಕ ಬಿಡುಗಡೆಗೊಂಡು ಅಧ್ಯಕ್ಷೀಯ ಹುದ್ದೆಯಲ್ಲಿ ಮುಂದುವರಿಯುತ್ತಿದ್ದು 48 ಗಂಟೆಗಳಿಂದ ಹೆಚ್ಚು ಕಾಲ ಜೈಲಲ್ಲಿದ್ರೆ ಅಧ್ಯಕ್ಷಿಯಾ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ಇಲ್ಲದಿದ್ದರೂ ಸಹ ಕಾನೂನಿಗೆ ವಿರುದ್ಧವಾಗಿ ಅಧಿಕಾರದ ದುರ್ಬಳಕೆ ಮಾಡ್ತಾ ಇದ್ದರೆ. ಈ ಬಗ್ಗೆ ಅಧ್ಯಕ್ಷೀಯ ಹುದ್ದೆಯಿಂದ ವಜಾಗೊಳಿಸಲು ಬಂಟ್ವಾಳ ಕಾರ್ಯನಿರ್ವಹಕಾಧಿಕಾರಿಗಳಿಗೆ, ಜಿಲ್ಲಾ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳಿಗೆ, ಜಿಲ್ಲಾ ಉಪಕಾರ್ಯದರ್ಶಿಗಳಿಗೆ, ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಆಯುಕ್ತರಿಗೆ, ರಾಜ್ಯಸರಕಾರದ ಕಾರ್ಯದರ್ಶಿಗಳಿಗೆ ಈಗಾಗಲೇ ಮನವಿ ನೀಡಿದ್ದೇವೆ. ಪ್ರಕರಣ ಮಾನ್ಯ ಘನ ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೆ ಹುದ್ದೆಯಲ್ಲಿ ಮುಂದುವರಿಯುವುದು ಕಾನೂನಿಗೆ ವಿರೋಧವಾಗಿದ್ದು ಅಲ್ಲದೆ ಇವರ ಹಿಂದೆ ಯಾವುದೋ ದೊಡ್ಡ ರಾಜಕೀಯ ವ್ಯಕ್ತಿಗಳ ಬೆಂಬಲವಿದ್ದಂತೆ ಕಾಣುತ್ತಿದೆ. ಹಾಗಾಗಿ ತಕ್ಷಣ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಆಗ್ರಹಿಸುತ್ತೇವೆ.
ಸತತ ಪ್ರಯತ್ನದಿಂದ 40 ದಿನಗಳ ನಂತರ ಒಂದನೇ ಆರೋಪಿಯ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ನೇರವಾಗಿ ಎರಡನೇ ಆರೋಪಿಯಾದ ಗ್ರಾಮಪಂಚಾಯತ್ ಬಿಲ್ ಕಲೆಕ್ಟರ್ ವಿಲಿಯಮ್ ರವರನ್ನು ಹುದ್ದೆಯಿಂದ ಅಮಾನತು ಮಾಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಲೋಕಾಯುಕ್ತ ಕೇಸಿನಲ್ಲಿ 48 ಗಂಟೆಗಳ ಕಾಲ ಜೈಲಿನಲ್ಲಿದ್ರೆ ತಕ್ಷಣವೇ ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾದದ್ದು ಅಧಿಕಾರಿಗಳ ಕರ್ತವ್ಯ ಆದ್ರೆ ವಜಾ ಮಾಡಲು 40 ದಿನ ಕಾಲಹರಣ ಮಾಡಿದ್ದು ಯಾಕೆ? ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳ ಬಗ್ಗೆ ಸಂಶಯ ಮೂಡಿದೆ. ಈ ಹಿಂದೆಯೇ ನಾನು ಅಧ್ಯಕ್ಷೆ ನಫೀಸರವರ ವಿರುದ್ಧ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಅಶೋಕ್ ಎನ್ ಜಿ ರವರ ವಿರುದ್ಧ ಸ್ವಂತ ಅನುದಾನ, ನೀರು ನಿರ್ವಹಣೆ ಹಾಗೂ 15 ನೇ ಹಣಕಾಸಿನಲ್ಲಿ ನಡೆದಿರುವ ಅವ್ಯವಹಾರ, ಹಣ ದುರುಪಯೋಗ ಹಾಗೂ ಗ್ರಾಮ ಸಭೆ ವರದಿಯಲ್ಲಿ ಸುಳ್ಳು ಮಾಹಿತಿ ನೀಡಿ ಗ್ರಾಮ ಸಭೆ ನಡೆಸಿ ಗ್ರಾಮಸ್ಥರನ್ನು ವಂಚಿಸದರ ಕುರಿತು ದೂರು ನೀಡಿದ್ದೇವೆ. ಈ ಹಿಂದಿನ ಗ್ರಾಮಸಭೆಯ ಹಣಕಾಸಿನ ಅಂತಿಮ ಶಿಲ್ಕು ಮತ್ತು ನಂತರದ ಗ್ರಾಮಸಭೆಯ ಆರಂಭ ಶಿಲ್ಕಿಗೂ 3 ಲಕ್ಷಕ್ಕೂ ಹೆಚ್ಚು ರೂಪಾಯಿಗಳ ವ್ಯತ್ಯಾಸ ಕಂಡುಬಂದಿದೆ. ಇದಲ್ಲದೆ ಗ್ರಾಮಪಂಚಾಯತ್ ನ ಬಿಲ್ ಬುಕ್ ಪ್ರಕಾರವಾಗಿ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಪಡೆದ ಮಾಹಿತಿಯಂತೆ ಹಲವಾರು ಕಾಮಗಾರಿಗಳ ಹೆಸರಿನಲ್ಲಿ ಅವ್ಯವಹಾರ ನಡೆದಿದೆ. ದೆಹಲಿ ಪ್ರವಾಸದ ಬಗ್ಗೆ ರೈಲಿನಲ್ಲಿ ಪ್ರಯಾಣಿಸುವ ಸುತ್ತೋಲೆ ಇದ್ದರು ಕಾನೂನು ಉಲ್ಲಂಘಿಸಿ ವಿಮಾನದಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸಿ 37920 ರೂಪಾಯಿ ಗ್ರಾಮಸ್ಥರ ತೆರಿಗೆ ಹಣವನ್ನು ದುಂದುವೆಚ್ಚ ಮಾಡಿರುತ್ತಾರೆ. ಮಾಹಿತಿ ಹಕ್ಕಿನ ಮೂಲಕ ಪಡೆದ ಮಾಹಿತಿಯ ನಂತರ ಬಿಲ್ ರಿಜಿಸ್ಟರ್ ಪುಸ್ತಕದಲ್ಲಿ ತಿದ್ದುಪಡಿ ಮಾಡಿ ಕಾನೂನು ಉಲ್ಲಂಘನೆ ಮಾಡಿಕೊಂಡಿರುತ್ತಾರೆ. ಘನ ತ್ಯಾಜ ಘಟಕದ ವಾಹನ ಕ್ಕೆ ಚಾಲಾಕಿ ಇದ್ದರೂ ತಾನೇ ವಾಹನ ಓಡಿಸುವ ರೀತಿ ಸುಳ್ಳು ಮಾಹಿತಿಯನ್ನು ಕೆಲವು ಮಾಧ್ಯಮಕ್ಕೆ ಕೊಟ್ಟು ಹಲವಾರು ಪ್ರಶಸ್ತಿ ಯನ್ನು ಪಡೆದು ನಾಗರಿಕ ಸಮಾಜವನ್ನು ಮೂರ್ಖರನ್ನಾಗಿಸಿದ್ದಾರೆ. ನಿರ್ಣಯ ಕ್ರಿಯಾ ಯೋಜನೆ ಮಾಡದೆಯೇ ಸಾವಿರಾರು ರೂಪಾಯಿಗಳ ನಕಲಿ ಬಿಲ್ಲ್ ಮಾಡಿ ಕಾಮಗಾರಿ ಮಾಡದೆಯೇ ಭ್ರಷ್ಟಾಚಾರ ಮಾಡಿರುತ್ತಾರೆ.ಗ್ರಾಮ ಸಭೆಯ ನಿರ್ಣಯ ದಾಖಲಾತಿ ಪುಸ್ತಕದಲ್ಲಿ ಗ್ರಾಮ ಸಭೆ ನಡೆದು ಕೆಲವು ದಿನಗಳ ನಂತರ ತಿದ್ದುಪಡಿ ಮಾಡಿ ಕಾನೂನು ಉಲ್ಲಂಘನೆ ಮಾಡಿಕೊಂಡಿರುತ್ತಾರೆ. ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಳು ಕರ್ತವ್ಯಕ್ಕೆ ಬರದೇ ಹಾಜರಾತಿ ಹಾಕಿ ಕರ್ತವ್ಯ ಲೋಪ ಎಸಗಿದ್ದಾರೆ. ಕಡಂಬಿಲ ಸ್ಥಾವರದ ಪಂಪ್ ಚಾಲಕರದ ನಫೀಸಾ ರವರ ಸಂಬಂಧಿಯಾದ ಸಿದ್ದಿಕ್ ಎಂಬುವವರಿಗೆ ನೀರು ನಿರ್ವಹಣೆಯಲ್ಲಿ ಕಾನೂನು ಬಾಹಿರವಾಗಿ 2 ತಿಂಗಳ ಗೌರವಧನ ಹೆಚ್ಚು ಪಾವತಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುತ್ತಾರೆ. ಕಚೇರಿ ಟಿವಿ ಸರಿ ಇದ್ದರೂ ನಕಲಿ ರಿಪೇರಿ ಬಿಲ್ ಸೃಷ್ಟಿಸಿ 19 ಸಾವಿರ ಕ್ಕೂ ಹೆಚ್ಚು ವಂಚಿಸಿರುವುದು. ಒಂದೇ ಕಾಮಗಾರಿಯಲ್ಲಿ ಮೂರೂ -ನಾಲ್ಕು ಬಿಲ್ ಗಳನ್ನು ಸೃಷ್ಟಿಸಿ ಹಣ ವಂಚನೆ ಮಾಡಿ ಕೊಂಡಿರುತ್ತಾರೆ. ಜನರಿಂದ ತೆರಿಗೆ ಹಣವನ್ನು ಸಂಗ್ರಹಿಸಿ ಸಂಗ್ರಹವಾದ ಮೊತ್ತವನ್ನು ಅಂದೇ ಬ್ಯಾಂಕ್ ಖಾತೆಗೆ ಪಾವತಿಸಬೇಕು ಅನ್ನುವ ನಿಯಮ ಇದ್ದರೂ ತಿಂಗಳುಗಟ್ಟಲೆ ಹಣವನ್ನು ಸ್ವಂತಕ್ಕೆ ಬಳಸಿ ಸುಮಾರು ತಿಂಗಳುಗಳ ನಂತರ ಬ್ಯಾಂಕ್ ಗೆ ಪಾವತಿಸುವ ಮೂಲಕ ಹಣವನ್ನು ದುರುಪಯೋಗಪಡಿಸಿರುವುದು ಕಂಡು ಬಂದಿದೆ.


ಹೀಗೆ ಇನ್ನಿತರ ಅವ್ಯವಹಾರದ ಬಗ್ಗೆ, ಒಟ್ಟು 9 ಲಕ್ಷಕ್ಕೂ ಹೆಚ್ಚಿನ ಅವ್ಯವಹಾರದ ಬಗ್ಗೆ ನಾನು ದಾಖಲೆ ಸಹಿತ ಈ ಮೊದಲೇ ಲೋಕಾಯುಕ್ತರಿಗೆ, ಬಂಟ್ವಾಳ ಕಾರ್ಯನಿರ್ವಹಕಾಧಿಕಾರಿಯವರಿಗೆ,ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ , ಜಿಲ್ಲಾ ಉಪಕಾರ್ಯದರ್ಶಿಗಳಿಗೆ, ದೂರು ನೀಡಿದ್ದು, ಅವ್ಯವಹಾರ ನಡೆದಿರುವ ಬಗ್ಗೆ ತಾಲೂಕು ಪಂಚಾಯತ್ ನಿಂದ ತನಿಖೆ ನಡೆಸಿ ವರದಿಯನ್ನು ಜಿಲ್ಲಾ ಪಂಚಾಯತ್ ಗೆ ಸಲ್ಲಿಸಿದ್ದು ಆ ವರದಿಯಲ್ಲಿ ಅವ್ಯವಹಾರ ಸಾಬೀತಾಗಿದ್ದರೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಇನ್ನು ಕಾನೂನು ಕ್ರಮ ಕೈಗೊಳ್ಳದೆ, ಅವರನ್ನು ಕಾಣದ ಕೈಗಳು ಬೆಂಬಲಕ್ಕೆ ನಿಂತಂತೆ ಅನುಮಾನ ವ್ಯಕ್ತವಾಗಿದ್ದು. ಅಧ್ಯಕ್ಷೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ.

ಇದಲ್ಲದೆ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿ ಸಿ ಟಿವಿಯ ಕನೆಕ್ಷನ್ ಅಧ್ಯಕ್ಷರ ಮೊಬೈಲ್ ಗೆ ಸಂಪರ್ಕಿಸಿ ಅದರ ಮುಖಾಂತರ ರಾತ್ರಿಯ ಸಮಯದಲ್ಲಿ ಪೆರುವಾಯಿ ಜಂಕ್ಷನ್ ಬಳಿ ಪೊಲೀಸರ ನಾಕಾಬಂಧಿ ಇದ್ದು ಅಕ್ರಮ ಗೋಸಾಗಾಟಗಾರರಿಗೆ ಪೊಲೀಸರ ಚಲನವಲನಗಳನ್ನು ಗಮನಿಸಿ ಮಾಹಿತಿ ಕೊಡುವ ಬಗ್ಗೆ ಅಧ್ಯಕ್ಷೆಗೆ ನಫೀಸರ ಮೇಲೆ ಗಂಭೀರ ಆರೋಪ ಇದ್ದು ಇದರ ಬಗ್ಗೆಯೂ ಇಲಾಖೆ ತನಿಖೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಹಾಗೂ ಈ ಹಿಂದೆಯೇ ಘನತ್ಯಾಜ ಘಟಕದ ಮುಖ್ಯ ದ್ವಾರದ ಶಟರ್ ಕದ್ದ ಆರೋಪವು ಇವರ ಮೇಲಿದೆ. ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ನಿನ್ನೆಯಿಂದ ಹಣಕಾಸಿಗೆ ಸಂಬಂಧಿಸಿದ ಅಧಿಕಾರವನ್ನು ಜಿಲ್ಲಾಪಂಚಾಯತ್ ನಿಂದ ತೆಗೆದಿದ್ದರೆ ಆದರೂ ಇನ್ನೂ ಸಹ ಯಾವ ಮುಖ ಇಟ್ಟು ಕೊಂಡು ಅಧ್ಯಕ್ಷೆ ಕುರ್ಚಿಯಲ್ಲಿ ಕುತ್ಕೊಂಡಿದ್ದಾರೆ? ಅಧ್ಯಕ್ಷೆ ಗೆ ಸ್ವಲ್ಪನಾದ್ರು ನೈತಿಕತೆ ಅನ್ನುವುದು ಇದ್ದಲ್ಲಿ ತಕ್ಷಣವೇ ರಾಜೀನಾಮೆ ಕೊಟ್ಟು ಮುಜುಗರದಿಂದ ಪಾರಾಗಿ ಇಲ್ಲವಾದಲ್ಲಿ ನಿಮ್ಮ ನೇತೃತ್ವದಲ್ಲಿ ಮುಂದಿನ ಯಾವುದೇ ಪಂಚಾಯತ್ ಸಭೆ ನಡೆಸಲು ಬಿಡುವುದಿಲ್ಲ ಅನ್ನುವ ಎಚ್ಚರಿಕೆಯನ್ನು ಈ ಮೂಲಕ ಗ್ರಾಮಸ್ಥರಾದ ತಾವುಗಳು ನೀಡುತ್ತಿದ್ದೇವೆ.ಪೆರುವಾಯಿ ಗ್ರಾಮ ಪಂಚಾಯತ್ ನಾ ಭ್ರಷ್ಟಾಚಾರ ದ ವಿರುದ್ಧ ಶಾಸಕರು, ಸಂಸದರು ಹಾಗೂ ರಾಜಕೀಯ ನಾಯಕರು ಧ್ವನಿಗೂಡಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತಿದ್ದೇವೆ.
ಪಂಚಾಯತ್ ನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಗ್ರಾಮ ಸಭೆಯಲ್ಲಿ ಪ್ರಶ್ನಿಸಿದ ಕಾರಣಕ್ಕಾಗಿ ನಮ್ಮ ಮೇಲೆ ಸುಳ್ಳು ದೂರನ್ನು ದಾಖಲಿಸಿ, ಷಡ್ಯಂತ್ರ ನಡೆಸಲು ಪ್ರಯತ್ನಿಸಿದ್ದಾರೆ.
ಅವ್ಯವಹಾರದ ಬಗ್ಗೆ ಆರೋಪ ಹಾಗೂ ಭ್ರಷ್ಟಾಚಾರ ಆರೋಪ ಮಾನ್ಯ ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೆ ಹುದ್ದೆಯಲ್ಲಿ ಮುಂದುವರಿಯುವುದು ಕಾನೂನಿಗೆ ವಿರೋಧವಾಗಿದ್ದು ಹಾಗಾಗಿ ತಕ್ಷಣ ಅಧ್ಯಕ್ಷೆ ಶ್ರೀಮತಿ ನಫೀಸಾರವರನ್ನು ವಜಾಗೊಳಿಸಲು ಒತ್ತಾಯಿಸುತ್ತಿದ್ದೇವೆ. ಹಾಗೂ ಅವರಿಗೆ ಬೆಂಬಲವಾಗಿ ನಿಂತ ಸ್ವಯಂ ವರ್ಗಾವಣೆ ಪಡೆದು ತೆರಲಿರುವ ಭ್ರಷ್ಟಾಚಾರದ ಬಗ್ಗೆ ಆರೋಪ ಇರುವ ಪೆರುವಾಯಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಅಶೋಕ್ ಎನ್ ಜಿ, ಬಂಟ್ವಾಳ ಕಾರ್ಯನಿರ್ವಹಖಾಧಿಕಾರಿ ಸಚಿನ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ 21 -10 -2025 ಮಂಗಳವಾರದಂದು ಪೆರುವಾಯಿಯ ಎಲ್ಲಾ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಯತೀಶ್ ಪೆರುವಾಯಿ, ಗಣೇಶ್ ರೈ, ಗೋಪಾಲಕೃಷ್ಣ ಶೆಟ್ಟಿ, ವಿನಿತ್ ಶೆಟ್ಟಿ, ಗಿರೀಶ್ ಪಾಟಾಳಿ ಉಪಸ್ಥಿತರಿದ್ದರು.