
ವಿಟ್ಲ :ಹನಿಟ್ರ್ಯಾಪ್ ಮಾಡಿ 45 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದ ಆರೋಪದಲ್ಲಿ ಏಳು ಮಂದಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


53 ವಯಸ್ಸಿನ ಕೇರಳ ಮೂಲದ ಸಂತ್ರಸ್ತ ವ್ಯಕ್ತಿಯೊಬ್ಬರು ನೀಡಿದ ದೂರಿನನ್ವಯ ಬಷೀರ್ ಕಡಂಬು, ಆಯಿಷಾತುಲ್ ಮಿಶ್ರಿಯ,ಸಫೀಯ ಮಾಣಿ, ಸಫೀಯ ಕೇರಳ,ಸರಫುದ್ದೀನ್ ವಿಟ್ಲ, ಹಾಗೂ ಇತರೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆಯ ವಿವರ :
ಸಂತ್ರಸ್ತ ಪ್ರಾಯ 53 ವರ್ಷ ರವರು ಸೌದಿ ಅರೆಬಿಯಾದಲಿ ಸ್ವಂತ ಉದ್ಯೋಗದಲ್ಲಿದ್ದು ಅವರ ಹೆಂಡತಿಯ ಅನಾರೋಗ್ಯದಿಂದ ಮದುವೆಯಾಗುವುದಾಗಿ ತೀರ್ಮಾನಿಸಿ ಅವರ ಸ್ನೇಹಿತರಾದ ಕೇರಳದ ಸಫೀಯಾ ಎಂಬವರ ಮೂಲಕ ಕೇರಳದ ಹುಡುಗಿಯೊಬ್ಬಳು ಮಂಗಳೂರಿನಲಿದ್ದಾರೆ ಹೆಣ್ಣು ನೋಡಲು ಮಂಗಳೂರಿಗೆ ಬರುವಂತೆ 2024ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ ಮಂಗಳೂರಿಗೆ ಸೆಫಿಯಾ ರವರು ಪಿರ್ಯಾದಿದಾರರನ್ನು ಕರೆಯಿಸಿಕೊಂಡು ಅದರಂತೆ ಪಿರ್ಯಾದಿದಾರರು ಮಂಗಳೂರಿಗೆ ಬಂದಾಗ ಅಲ್ಲಿ, ಬಶೀರ್ ವಿಟ್ಲ ಆಯಿಷಾತುಲ್ ಮಿಶ್ರಿಯಾ ಕೆ ಪಿ, ಆಕೆಯ ಅಮ್ಮ ಜುಬೈದಾ, ಸೆಫಿಯಾ ವಿಟ್ಲ ಸಫಿಯಾ ಕೇರಳ ಹಾಗೂ ಅಪರಿಚಿತ ಇಬ್ಬರೂ ಗಂಡಸರಿದ್ದು ಆಯಿಷತ್ ಮಿಶ್ರಿಯಾ ಕೆ ಪಿ ರವರನ್ನು ಮದುವೆಯಾಗುವ ಹುಡುಗಿ ಎಂಬುದಾಗಿ ಪಿರ್ಯಾದಿದಾರರಿಗೆ ತೋರಿಸುತ್ತಾರೆ.


ಆಗ ಪಿರ್ಯಾದಿದಾರರು ಮದುವೆಯಾಗಲು ಕೇರಳದ ಹುಡುಗಿಯೇ ಬೇಕು ಎಂಬುದಾಗಿ ಹೇಳಿರುತ್ತಾರೆ. ನಂತರ ಪಿರ್ಯಾದಿದಾರರನ್ನು ಆಯಿಷತ್ ಮಿಕ್ರಿಯಾ ಕೆ ಪಿ ರವರ ಜೊತೆಯಲಿಯೇ ಕೂರಿಸಿಕೊಂಡು ಆರೋಪಿತರು ಫೋಟೋ ತೆಗೆದುಕೊಂಡಿರುತ್ತಾರೆ. ನಂತರ ಪಿರ್ಯಾದಿದಾರರು ಕೇರಳಕ್ಕೆ ಹೋಗಿದ್ದು, ನಂತರದ ದಿನದಲಿ ಬಶೀರ್ ಎಂಬವರು ಪಿರ್ಯಾದಿದಾರರಿಗೆ ಕರೆ ಮಾಡಿ ಪಿರ್ಯಾದಿದಾರರ ಮತ್ತು ಆಯಷತ್ ಮಿಶ್ರಿಯಾ ಕೆ ಪಿ ರವರ ಖಾಸಗಿ ವಿಡಿಯೋ ತನ್ನ ಬಳಿ ಇದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ, ಶೇರ್ ಮಾಡುತ್ತೇನೆ, ಒಂದು ಕೋಟಿ ಕೊಟ್ಟರೆ ಮಾತ್ರ ಬಿಡುತ್ತೇನೆ ಎಂದು ಹೇಳಿರುತ್ತಾನೆ. ನಂತರ ಪಿರ್ಯಾದಿದಾರರು 2024ನೇ ಇಸವಿಯ ಅಕ್ಟೋಬರ್ ತಿಂಗಳಲ್ಲಿ ಪಿಟ್ಲ, ಬಶೀರ್ ನ ಪತ್ನಿ ಮನೆಗೆ 5 ಲಕ್ಷ ನಗದಿನೊಂದಿಗೆ ಬಂದಾಗ ಆ ಮನೆಯಲ್ಲಿ, ಬಶೀರ್, ಸೆಫಿಯಾ, ಆಯಿಷತ್ ಮಿಶ್ರೀಯಾ, ಜುಬೈದಾ ಹಾಗೂ ಇಬ್ಬರು ಗಂಡಸರಿದ್ದು ಅವರೊಂದಿಗೆ ಹಿರ್ಯಾದಿದಾರರು ಮಾತುಕೆ ನಡೆಸಿದಾಗ ಪಿರ್ಯಾದಿದಾರರನ್ನು ಬೆದರಿಸಿ ಬಶೀರ್ ಮತ್ತು ಉಳಿದ ಇಬ್ಬರೂ ಅಪರಿಚಿತರು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ತಲೆಗೆ ಜಜ್ಜಿ 5 ಲಕ್ಷ ರೂಪಾಯಿಯನ್ನು ತೆಗೆದುಕೊಂಡಿರುತ್ತಾರೆ. ನಂತರ ಪಿರ್ಯಾದಿದಾರರು ಕೇರಳಕ್ಕೆ ಹೋಗಿ ಒಂದು ವಾರ ಮದ್ದು ತೆಗೆದುಕೊಂಡಿರುತ್ತಾರೆ, ನಂತರ ಪಿರ್ಯಾದಿದಾರರು ಸೌದಿಗೆ ಹೊರಡುವಾಗ ಆಯಿಷತ್ ಮಿಶ್ರಿಯಾ ಕೆ ಪಿ ಪಿರ್ಯಾದಿದಾರರಿಗೆ ಕಾಲ್ ಮಾಡಿ ಪಿರ್ಯಾದಿದಾರರ ಹೆಂಡತಿಗೆ ಪೋಟೋ ಕಳುಹಿಸುತ್ತೇನೆ ನಾನು ನಿಮ್ಮ ಹೆಂಡತಿ ಅಂತ ಹೇಳುತ್ತೇನೆ ವಿಡಿಯೋ ಲೀಕ್ ಮಾಡುತ್ತೇನೆ ಎಂಬುದಾಗಿ ಹೆದರಿಸಿ ಆಕೆಗೆ ಮನೆ ಕಟ್ಟಲು ಹಣ ಬೇಕು ಎಂದು ಹೇಳಿ ಸರ್ಪುದ್ದೀನ್ ಎನ್ನುವ ಖಾತೆಗೆ 9 ಲಕ್ಷ ಹಣವನ್ನು ಹಾಕಿಸಿಕೊಂಡಿರುತ್ತಾಳೆ.

ನಂತರ ಮೇಲಿನ ಆರೋಪಿಗಳೆಲ್ಲರೂ ಪಿರ್ಯಾದಿದಾರರಿಗೆ ಹೆದರಿಸಿ ಒಟ್ಟು 20 ಲಕ್ಷ ಹಣವನ್ನು ನೇರವಾಗಿ ಆರೋಪಿಗಳಿಗೆ ಪಾವತಿಸಿದ್ದು, 24.80 ಲಕ್ಷ ಹಣವನ್ನು ಬೇರೆ ಬೇರೆಯವರ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಒಟ್ಟು 44.80 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿರುತ್ತಾರೆ. ನಂತರ ಪಿರ್ಯಾದಿದಾರರು ಮರ್ಯಾದೆಗೆ ಅಂಜಿ ದೂರು ನೀಡದೇ ಇದ್ದು, ತದ ನಂತರ ಕೂಡ ಆರೋಪಿತರು ಪಿರ್ಯಾದಿದಾರರನ್ನು ಹನಿಟ್ರಾಪ್ ಮಾಡಿ ಹಣ ತೆಗೆದು ಹಲೆ ಮಾಡುತ್ತಾರೆಂದು ಪುತ್ತೂರು ಸಂಪ್ಯ ಠಾಣೆಗೆ ದೂರು ನೀಡಿರುತ್ತಾರೆ, ತದನಂತರ ಧರ್ಮದ ಕೆಲ ಜನರು ದರ್ಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮಾತುಕತೆಯಲ್ಲಿ ವಿಚಾರಿಸುತ್ತೇವೆಂದು ಒತ್ತಾಯಿಸಿರುತ್ತಾರೆ, ಈಗಿನ ಒಂದು ವಾರದ ಒಳಗೆ ಬಶೀರ್ ಎಂಬವನು ಪಿರ್ಯಾದಿದಾರರ ಹೆಂಡತಿಗೆ ಬ್ಲೂ ಫಿಲಂ ಕಳುಹಿಸಿ ಪಿರ್ಯಾದಿದಾರರ ಸೆಕ್ಸ್, ವಿಡಿಯೋ ಲೀಕ್ ಮಾಡುವುದಾಗಿ ಬೇರೆ ಬೇರೆ ನಂಬ್ರಗಳಲ್ಲಿ ಕರೆ ಮಾಡಿರುತ್ತಾರೆ, ಈ ಎಲ್ಲಾ ಘಟನೆಗಳಿಂದ ಪಿರ್ಯಾದಿದಾರರು ಅವರ ಹೆಂಡತಿ, ಮಕ್ಕಳ ಜೀವ ಮತ್ತು ಮರ್ಯಾದೆಗಾಗಿ ಅಂಜಿ ದೂರು ನೀಡುತ್ತಿರುವುದಾಗಿ. ದೂರಿನಲ್ಲಿ ಉಲ್ಲೇಖಿಸಲಾಗಿದೆ.