ಮಂಗಳೂರು: ನಿಷೇಧಿತ ಪಿ.ಎಫ್.ಐ ಸಂಘಟನೆ ಪರ ಪೋಸ್ಟ್- ಸೈಯ್ಯದ್ ಇಬ್ರಾಹಿಂ ತಂಙಳ್ ಬಂಧನ

0 0
Read Time:2 Minute, 9 Second

ಮಂಗಳೂರು: ನಿಷೇದಿತ ಫಿ.ಎಫ್.ಐ ಸಂಘಟನೆಯು ಪರ ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್ ಗ್ರೂಪ್‌‌ನಲ್ಲಿ ಪೋಸ್ಟ್ ಪ್ರಕಟಿಸಿರುವ ಆರೋಪದಲ್ಲಿ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಉಪ್ಪಿನಗಂಡಿ ಸಮೀಪ ರಾಮ ಕುಂಜ ಗ್ರಾಮ ಬೀಜಾತಳಿ ಹೌಸ್ ನಿವಾಸಿ ಸೈಯ್ಯದ್ ಇಬ್ರಾಹಿಂ ತಂಙಳ್ (55) ಎಂದು ಗುರುತಿಸಲಾಗಿದೆ.

ಸೆ.28ರಂದು ಫಿ.ಎಫ್.ಐ ಸಂಘಟನೆಯು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿತ್ತು. ಒ.09ರಂದು ಆರೋಪಿ ಸೈಯ್ಯದ್ ಇಬ್ರಾಹಿಂ ತಂಙಳ್‌ರವರು ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್ ಗ್ರೂಪ್‌‌ನಲ್ಲಿ ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾದ Popular Front of India (PFI) ಸಂಘಟನೆಯ ಪರವಾಗಿ ಪೋಸ್ಟ್ ಪ್ರಕಟಿಸಿ, ಈ ಸಂಘಟನೆಯ ಬಗ್ಗೆ ಸ್ವಯಂ ಪ್ರೇರಿತನಾಗಿ ಪ್ರಚಾರ ಮಾಡಿ ಅಪರಾಧಿಕ ಬಲ ಪ್ರದರ್ಶನದ ಮೂಲಕ ಆತಂಕ ಉಂಟು ಮಾಡಿದ ಕೃತ್ಯವೆಸಗಿದ್ದರಿಂದ, ಪಿ.ಎಸ್.ಐ ರವರು ಸಲ್ಲಿಸಿರುವ ದೂರನ್ನು ಆಧಾರಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.113/2025 U/s 10 (a), (i), 13, 18 UAPA Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಒ.9-ರಂದು ಆರೋಪಿಯನ್ನು ಮಂಗಳೂರು ನಗರದ ಉರ್ವ ಸ್ಟೋರ್ ಬಳಿಯಿಂದ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು, ಆತನ ವಶದಲ್ಲಿದ್ದ ಮೋಬೈಲ್ ಫೋನ್‌‌ನ್ನು ಅಮಾನತ್ತು ಪಡಿಸಿಕೊಂಡು ತನಿಖೆಗೆ ಒಳಪಡಸಿರುತ್ತದೆ. ಒ.10ರಂದು ಆರೋಪಿಯನ್ನು 49 ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (CCH-50) ಮತ್ತು ಎನ್.ಐ.ಎ. ಪ್ರಕರಣಗಳ ವಿಶೇಷ ನ್ಯಾಯಾಲಯ ಬೆಂಗಳೂರು ಇಲ್ಲಿಗೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ದಿನಾಂಕ 24-10-2025 ವರೆಗೆ ನ್ಯಾಯಾಂಗ ವಶಕ್ಕೆ ನೀಡಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *