
ಮಂಗಳೂರಿನ ಅಡ್ಯಾರ್ನಲ್ಲಿ ಮನೆಯೊಂದರ ಅಂಗಳದಿಂದ ದನವನ್ನು ಕಳವು ಮಾಡಿದ ಮೂವರು ಆರೋಪಿಗಳನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಮಂಗಳೂರಿನ ನಿವಾಸಿಗಳಾದ ಶಾಬಾಜ್ ಅಹಮ್ಮದ್ , ಮೊಹಮ್ಮದ್ ಸುಹಾನ್, ವಳಚ್ಚಿಲ್ ಖಾದರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಶಾಬಾಜ್ ಕಣ್ಣೂರು ಮತ್ತು ಸುಹಾನ್ ವಳಚ್ಚಿಲ್ ಇವರು ದನ ಕಳ್ಳತನ ಮಾಡಿ, ವಳಚ್ಚಿಲ್ ಖಾದರ್ನಿಗೆ ಮಾರಾಟ ಮಾಡಿದ್ದರು. ಈ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಶಾಬಾಜ್ ಅಹ್ಮದ್ ಕಣ್ಣೂರು ಎಂಬಾತನ ವಿರುದ್ದ ಈಗಾಗಲೇ ಮಂಗಳೂರು ಗ್ರಾಮಾಂತರ ಮತ್ತು ಕಂಕನಾಡಿ ಠಾಣೆಯಲ್ಲಿ ಒಂದು ಕೊಲೆ, ಎರಡು ಕೊಲೆ ಪ್ರಯತ್ನ ಮತ್ತು ಒಂದು ದೊಂಬಿ ಪ್ರಕರಣಗಳು ಮತ್ತು ಮೊಹಮ್ಮದ್ ಸುಹಾನ್ ಎಂಬಾತನ ವಿರುದ್ದ ಉಳ್ಳಾಲ ಠಾಣೆಯಲ್ಲಿ ಒಂದು ಎನ್.ಡಿ.ಪಿ.ಎಸ್ ಪ್ರಕರಣ ಹಾಗೂ ವಳಚ್ಚಿಲ್ ಖಾದರ್ ಮೊಹಮ್ಮದ್ ಎಂಬಾತನ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2024 ರಲ್ಲಿ ಒಂದು ಗೋ ಹತ್ಯೆ ಪ್ರಕರಣ ದಾಖಲಾಗಿದೆ.


ಇನ್ನು ಜಾನುವಾರು ಕಳ್ಳತನ ಮಾಡಿ ವಧೆ ಮಾಡುತ್ತಿದ್ದ ಜಾಗವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ -2020 ರಲ್ಲಿ ಪ್ರದತ್ತವಾದ ಅಧಿಕಾರದಂತೆ ಜಪ್ತಿ ಮಾಡಿ, ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ
