
Read Time:1 Minute, 21 Second
ಬಂಟ್ವಾಳ: ಆಟವಾಡುತ್ತಿದ್ದ ಬಾಲಕಿಯ ವಾಸ್ತವ್ಯವಿರದ ಮನೆಯೊಂದರ ಹಿಂದೆ ಕರೆದೊಯ್ದು ಬಲಾತ್ಕಾರವಾಗಿ ಅತ್ಯಾಚಾರಗೈದ ಆರೋಪಿತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.


ಇರಾ ಗ್ರಾಮದ ಸೂತ್ರಬೈಲು ನಿವಾಸಿ ಅಬೂಬಕರ್ (50) ಬಂಧಿತ ಆರೋಪಿ.
ಬಾಲಕಿ ಆಟವಾಡುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ನೆರೆಮನೆಯ ನಿವಾಸಿ ಅಬೂಬಕರ್ ಅಲ್ಲಿಯೇ ಯಾರು ವಾಸ್ತವ್ಯವಿರದ ಮನೆಯ ಹಿಂಭಾಗಕ್ಕೆ ಆಕೆಯನ್ನು ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಬಲಾತ್ಕಾರವಾಗಿ ಲೈಂಗಿಕಕ್ರಿಯೆ ನಡೆಸಿದ್ದಾನೆ.


ಈ ಬಗ್ಗೆ ಬಾಲಕಿಯ ಪೋಷಕರು ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೊಪಿಯನ್ನು ದಸ್ತಗಿರಿಮಾಡಿರುವ ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದು ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಘಟನೆ ನಡೆದ ವೇಳೆ ಆರೋಪಿ ಅಬೂಬಕರ್ ಅನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಬಗ್ಗೆ ಪ್ರತಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.