ಉಡುಪಿ: ಜುವೆಲ್ಲರ್ಸ್ ಅಂಗಡಿ ಮಾಲೀಕನಿಗೆ 89 ಲಕ್ಷ ರೂ.ವಂಚನೆ..! ಆರೋಪಿ ಅರೆಸ್ಟ್

0 0
Read Time:3 Minute, 7 Second

ಉಡುಪಿ: ನಗರದ ಬಡಗುಪೇಟೆಯ ಜುವೆಲ್ಲರಿ ಅಂಗಡಿಯ ಮಾಲಕರಿಗೆ ಡಿಜಿಟಲ್ ಎರೆಸ್ಟ್ ಹೆಸರಿನಲ್ಲಿ 89ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಓರ್ವನನ್ನು ಜಿಲ್ಲಾ ಸೆನ್ ಪೊಲೀಸರು ಬಂಧಿಸಿ 7 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಕನ್ನಾರ್‌ ಶಂಕರ್ ಆಚಾರ್ಯರ ಪುತ್ರ ಸಂತೋಷ ಕುಮಾರ್‌ (45)ರಿಗೆ ಕಳೆದ‌ ಸೆ. 11 ರಂದು ಯಾರೋ ಅಪರಿಚಿತರು ಕರೆಮಾಡಿ Telecom Regulatory Authority of India ದಿಂದ ಕರೆ ಮಾಡುತ್ತಿದ್ದು, ಈ ಮೊಬೈಲ್‌ ನಂಬ್ರವು ನಿಮ್ಮ ಹೆಸರಿನಲ್ಲಿ ಇದೆ ಈ ನಂಬ್ರದಲ್ಲಿ ಇಲ್ಲೀಗಲ್‌ ಅಡ್ವಟೈಸ್‌ಮೆಂಟ್‌ ಹಾಗೂ ಹೆರಾಸಿಂಗ್‌ ಟೆಕ್ಸ್ಟ್‌ ಮೆಸೇಜಸ್‌ ಆಗಿದ್ದು, ನಿಮ್ಮ ಮೇಲೆ ಒಟ್ಟು 17 ಎಫ್‌.ಐ.ಆರ್‌ ಆಗಿದ್ದು, ಇನ್ನು 2 ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟಾಕ್ಟ್‌ ನಂಬ್ರ ಡಿಸ್‌ಕನೆಕ್ಟ್‌ ಮಾಡುತ್ತೇವೆ. ನಿಮ್ಮ ಮೇಲೆ ಆರೆಸ್ಟ್‌ ವಾರಂಟು ಆಗಿರುತ್ತದೆ ಎಂಬುದಾಗಿ ಬೆದರಿಸಿದ್ದು ನಂತರ ವಾಟ್ಸಪ್‌ ವಿಡಿಯೋ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿಯು ಪೊಲೀಸ್‌ ಅಧಿಕಾರಿ ಸಮವಸ್ತ್ರದಲ್ಲಿದ್ದು, ಇನ್ಸಪೆಕ್ಟರ್‌ ಸೈಬರ್‌ ಅಂದೇರಿ ಈಸ್ಟ್‌ ಮುಂಬಾಯಿ ಎಂದು ಹೇಳಿ ಕೇಸು ಆಗಿರುವ ಬಗ್ಗೆ ಹಾಗೂ ಪಿರ್ಯಾದಿದಾರರ ಆಧಾರ್‌ ಕಾರ್ಡ್‌ ಲಿಂಕಿನಲ್ಲಿರುವ ಬ್ಯಾಂಕ್‌ ಅಕೌಂಟ್‌ ನರೇಶ್‌ ಗೋಯೆಲ್‌ ಎಂಬಾತನ ಮನಿ ಲಾಂಡ್ರಿಂಗ್‌ ಕೇಸ್‌ನಲ್ಲಿ ಅಕೌಂಟ್‌ ಇನ್‌ವಾಲ್‌ಮೆಂಟ್‌ ಇದೆ ಎಂದು ತಿಳಿಸಿ ಆದಾಯದ ಮೂಲ ಚೆಕ್‌ ಮಾಡುವುದಾಗಿ ತಿಳಿಸಿ ಪಿರ್ಯಾದಿದಾರರ ಬ್ಯಾಂಕ್‌ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದು ಸದ್ರಿ ಹಣವನ್ನು ಆರ್‌ಬಿಐಯಿಂದ ಫಂಡ್‌ ವೆರಿಪೇಕಶನ್‌ ಮಾಡಲು State Bank of India ಕ್ಕೆ ಜಮಾ ಮಾಡಲು ಹೇಳಿ ಹಣದ ಬಗ್ಗೆ ಕ್ಲೀಯರ್‌ ಆಗುವವರೆಗೆ ನಿಮ್ಮನ್ನು ವರ್ಚುವಲ್‌ ಆರೆಸ್ಟ್‌ ಮಾಡುವುದಾಗಿ ತಿಳಿಸಿ ರೂ. 89,00,000 ಹಣವನ್ನು ವರ್ಗಾಯಿಸಿಕೊಂಡಿರುತ್ತಾರೆ.

ಬಳಿಕ ಮೊಸ ಹೋದ ಬಗ್ಗೆ ಅರಿವಾದ ಕನ್ನಾರ್‌ ಸಂತೋಷ ಕುಮಾರ್‌ ಸೆನ್ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳ ಪತ್ತೆಗೆ ಕೇರಳ ಮತ್ತು ಮಹಾರಾಷ್ಟ ರಾಜ್ಯದ ಪುಣೆ ಕಡೆಗಳಲ್ಲಿ ಕಾರ್ಯಚರಣೆ ನಡೆಸಿ ಆರೋಪಿ ಯಾದಗಿರಿ ಜಿಲ್ಲೆ ಕಿರಣ್‌ (24)ನನ್ನು ಧಾರವಾಡದಲ್ಲಿ ದಸ್ತಗಿರಿ ಮಾಡಿ ಆತನಿಂದ ಮೊಬೈಲ್ ಪೋನ್ ಹಾಗೂ ರೂ.5 ಲಕ್ಷ ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಹಾಗೂ ಈ ಹಿಂದೆ ಕೇರಳ ರಾಜ್ಯದ ಮೊಹಮ್ಮದ್‌ ನಿಶಾಮ್‌ ಸಿ.ಕೆ ಎಂಬವರ ಖಾತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಹಣ ಜಮಾ ಆಗಿರುವ ರೂ.2ಲಕ್ಷ ಸ್ವಾಧೀನ ಪಡಿಸಲಾಗಿದ್ದು, ಒಟ್ಟು ಈ ಪ್ರಕರಣದಲ್ಲಿ ರೂ, 7,00,000 ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *