
ಮಂಗಳೂರು: ಕೊಲ್ಯ ಕುಲಾಲ ಸಮುದಾಯ ಭವನ ಇದರ 59ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ವಿವಿಧ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಸಂಘದ ಅಧ್ಯಕ್ಷರಾದ ಶ್ರೀ ವಿಟ್ಟಲ್ ಕಣ್ಣೀರ್ ತೋಟ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ್ ಕುತ್ತಾರ್ ಪ್ರಾಸ್ತವಿಕದೊಂದಿಗೆ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಮುಂಬೈ ಜ್ಯೋತಿ ಕೋ ಆಪರೇಟಿವ್ ಅಧ್ಯಕ್ಷರಾದ ಗಿರೀಶ್ ಸಾಲಿಯನ್ ಮುಂಬೈ ಸಂಘದ ಅಧ್ಯಕ್ಷರಾದ ಶ್ರೀ ರಘು ಮೂಲ್ಯ, ಮುಡಿಪು ಸಂಘದ ಅಧ್ಯಕ್ಷರಾದ ಪುಂಡರಿಕ್ಷ ಜೀವನ್ ಕುತ್ತಾರ್, ಜಯೇಶ್ ಗೋವಿಂದ, ಗಣೇಶ್( MRPL ), ಉದಯ ಶಂಕರ್, ಮಹಿಳಾ ಅಧ್ಯಕ್ಷೆ ಸುಲೋಚನ ಟೀಚರ್, ಕಾಸರಗೋಡು ಮಂಜೇಶ್ವರ ಕುಲಾಲ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ದೀಕ್ಷ, ಹಾಗೂ ಸಮುದಾಯ ಭವನ ಕಟ್ಟಡದ ನಿರ್ಮಾಣ ಸಮಿತಿ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.


ಸಂಘದ ಪದಾಧಿಕಾರಿಗಳಾದ ಪ್ರಕಾಶ್ ಪಿಲಿಕೂರು, ರಂಜಿತ್ ಉಚ್ಚಿಲ್, ಗಣೇಶ್ ಕಾಪಿಕಾಡ್, ಕಿಶೋರ್ ಕುತ್ತಾರ್, ತಾರಕ್ಷ ಉಚ್ಚಿಲ್, ರಾಜೀವಿ ಕೆಂಪು ಮಣ್ಣು, ಜಯಶ್ರೀ ಪ್ರಪುಲ್ಲ ದಾಸ್, ಆಶಾಲತಾ ದಾಸ್, ಹರಿಣಾಕ್ಷಿ ಟೀಚರ್, ಸಂಜೀವ ಸೋಮೇಶ್ವರ, ಪ್ರಕಾಶ್ ಕೋಟೆಕಾರ್, ವೆಂಕಪ್ಪ ಕಣೀರು ತೋಟ ಉಪಸ್ಥಿತರಿದ್ದರು.



ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಮಹಿಳಾ ಸದಸ್ಯರು ಕಾರ್ಯಕ್ರಮ ನಡೆಸಿಕೊಟ್ಟರು. ಹಾಗೂ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ನಿತ್ಯ ರೂಪಕವನ್ನು ನಡೆಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಪ್ರಜ್ಞಶ್ರೀಕುಲಾಲ್ ಮೂಳೂರು ಮತ್ತು ಶ್ರೀ ಜಯಂತ್ ಸಂಕೋಳಿಗೆ ಮಾಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
