ಶಕ್ತಿನಗರದ ವೈದ್ಯನಾಥ ಶಾಖೆಯ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ

0 0
Read Time:2 Minute, 21 Second

ಮಂಗಳೂರು : ಗಣೇಶೋತ್ಸವದ ಪ್ರಯುಕ್ತ ಶಕ್ತಿನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿಯ ವೈದ್ಯನಾಥ ಶಾಖೆಯ ವತಿಯಿಂದ 3ನೇ ವರ್ಷದ ಚಿತ್ರಕಲಾ ಸ್ಪರ್ಧೆಯು ದಿನಾಂಕ ಸೆಪ್ಟೆಂಬರ್ 7 ರಂದು ನಡೆಯಿತು. ಅಂಗನವಾಡಿ ಎಲ್. ಕೆ. ಜಿ ಯಿಂದ ಹಿಡಿದು 12ನೇ ತರಗತಿ ವರೆಗಿನ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಿತು.

ಈ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 120ಕ್ಕೂ ಮಿಕ್ಕಿದ ಸ್ಪರ್ಧಾಳುಗಳು ಭಾಗವಹಿಸದ್ದರು. ಹಾಗೆಯೇ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿಯ ವತಿಯಿಂದ ಪ್ರತೀ ಆದಿತ್ಯವಾರ ನಡೆಯುವಂತಹ ಬಾಲ ಸಂಸ್ಕಾರದ ಮಕ್ಕಳಿಗೂ ವಿವಿಧ ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಒಟ್ಟು 13 ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಿತು. ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಂಸಾ ಪತ್ರವನ್ನೂ ಕೂಡಾ ನೀಡುವ ಕಾರ್ಯಕ್ರಮ ಜರಗಿತು. ದೀಪಪ್ರಜ್ವಲನೆ ಮಾಡುವುದರೊಂದಿಗೆ ಕಾರ್ಯಕ್ರಮ ಹಾಗೂ ಸ್ಪರ್ಧೆಯನ್ನು ಪ್ರಾರಂಭಿಸಲಾಯಿತು. ಸುಮಾರು ಒಂದೂವರೆ ಗಂಟೆಯ ಅವಧಿಯ ಸಮಯದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವು ನಂತರ ಜರಗಿತು. ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿಯ ವೈದ್ಯನಾಥ ಶಾಖೆಯ ಎಲ್ಲಾ ಪ್ರಮುಖರು ಹಾಗೂ ಸರ್ವ ಕಾರ್ಯಕರ್ತರು, ಸ್ಪರ್ಧಾಳುಗಳ ಹೆತ್ತವರು, ಸ್ಥಳೀಯ ನಿವಾಸಿಗಳು ಈ ಸಂಧರ್ಭದಲ್ಲಿ ನೆರೆದಿದ್ದರು.

ಶಕ್ತಿನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿಯ ವೈದ್ಯನಾಥ ಶಾಖೆಯು ಈಗಾಗಲೇ 10 ವರ್ಷ ಪೂರೈಸಿದೆ. ಕೇವಲ ಈ ಕಾರ್ಯಕ್ರಮವಲ್ಲದೆ ವರಮಹಾಲಕ್ಷ್ಮಿ ಪೂಜೆ, ಕೃಷ್ಣಾಷ್ಟಮಿ ಕೃಷ್ಣ ವೇಷ ಸ್ಪರ್ಧೆ, ಗೋಪೂಜೆ, ರಕ್ಷಾಬಂಧನ ಸೇರಿದಂತೆ ಇನ್ನಿತರ ಹಬ್ಬಗಳು ಹಾಗೂ ಮತ್ತಿತರ ಸಮಾಜಮುಖಿ ಕಾರ್ಯಕ್ರಮಗಳನನ್ನು ಮಾಡುತ್ತಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *