
ದೇಶದಲ್ಲಿ ಇಂದಿನಿಂದ ಮೂರು ಕ್ರಿಮಿನಲ್ ಕಾನೂನುಗಳು ಜಾರಿಗೊಳ್ಳುತ್ತಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ (Indian Penal Code), ಸಿಆರ್ಪಿಸಿ (Criminal Procedure Code) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ಗೆ ಬದಲಿಗೆ ಹೊಸ ಕಾನೂನು ಜಾರಿಗೆ ಬರುತ್ತಿವೆ.ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯಲ್ಲಿ 1860ರಲ್ಲಿ ಜಾರಿ ಮಾಡಿದ್ದ ಐಪಿಸಿ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಎಂದು, 1898ರಲ್ಲಿ ಜಾರಿಗೆ ಬಂದಿದ್ದ CrPC ಬದಲಿಗೆ ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಎಂದು ಹಾಗೂ 1872ರಲ್ಲಿ ಬಂದಿದ್ದ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಾಗಿ ಭಾರತೀಯ ಸಾಕ್ಷ್ಯ ಕಾಯ್ದೆ ಎಂದು ಮಾಡಲಾಗಿದೆ.


ನೂತನ ಕಾನೂನು
ಭಾರತೀಯ ನ್ಯಾಯ ಸಂಹಿತೆ (BNS : Bharatiya Nyaya Sanhita)


ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS: Bharatiya Nagarik Suraksha Sanhita)

ಭಾರತೀಯ ಸಾಕ್ಷ್ಯ ಕಾಯ್ದೆ (BSA: Bharatiya Sakshya Adhiniyam)
ಈ ಮೂರು ಹೊಸ ಕಾಯ್ದೆಗೆ ಕಳೆದ ವರ್ಷ ಸಂಸತ್ನಲ್ಲಿ ಅನುಮೋದನೆ ದೊರೆತಿತ್ತು. ಡಿಸೆಂಬರ್ 25 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾತ್ರ ಸದ್ಯಕ್ಕೆ ಜಾರಿಗೊಳಿಸದೆ ಇರಲು ಸರ್ಕಾರ ನಿರ್ಧಾರ ಮಾಡಲಾಗಿದೆ.