
Read Time:1 Minute, 7 Second
ಉಪ್ಪಿನಂಗಡಿ: ರಥಸಪ್ತಮಿಯ ವಿಶೇಷ ದಿನದಂದು 1008 ಸೂರ್ಯ ನಮಸ್ಕಾರ ಪ್ರಸಾದ್ ಕುಲಾಲ್ ಸಿದ್ದಕಟ್ಟೆ ಇವರಿಂದ ನಾಳೆ (04-02-2025) ರಥಸಪ್ತಮಿ ವಿಶೇಷ ದಿನ ಉಪ್ಪಿನಂಗಡಿಯ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ 1008 ಸೂರ್ಯ ನಮಸ್ಕಾರಗಳನ್ನು ಮಾಡಲಿದ್ದಾರೆ.


ಸತತ ನಾಲ್ಕು ವರ್ಷಗಳಿಂದ 1008 ಸೂರ್ಯ ನಮಸ್ಕಾರವನ್ನು ಮಾಡಿ ಸಾಧನೆಗಾಗಿ ಮಾಡಿರುತ್ತಾರೆ…
ಯೋಗ ಶಿಕ್ಷಕರಾಗಿ ಮಕ್ಕಳಲ್ಲಿ ಪ್ರೇರಣೆಯನ್ನು ಮೂಡಿಸುತ್ತಾ ಮನಸ್ಸು ದೇಹ ಉಸಿರುಗಳನ್ನು ಉಲ್ಲಾಸವಾಗಿಡಲು ನಿತ್ಯ ಯೋಗ ಅಭ್ಯಾಸವನ್ನು ಮಾಡಿಸುತ್ತಿದ್ದಾರೆ. ಆನ್ಲೈನ್ ಮೂಲಕ ಮಕ್ಕಳಿಗೆ ಉಚಿತ ಯೋಗ ಶಿಕ್ಷಣವನ್ನು ಹೇಳಿಕೊಡುತ್ತಿದ್ದಾರೆ.


ಆಸಕ್ತರು ನಾಳೆ ಸಂಜೆ 4:30 ಕ್ಕೆ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಭಾಗವಹಿಸಬಹುದು. ಸಾಮೂಹಿಕ 108 ಸೂರ್ಯ ನಮಸ್ಕಾರವು 4:30 ರಿಂದ 6:30 ವರೆಗೆ ನಡೆಯಲಿದೆ.
