
Read Time:51 Second
ಉಡುಪಿ: ಕಲುಷಿತ ನೀರು ಸೇವಿಸಿ 1000ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಗಹ್ಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.


ಉಡುಪಿಯ ಬೈಂದೂರು ತಾಲೂಕಿನ ಉಪ್ಪಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರ್ಕಿಹಳ್ಳಿ ಹಾಗೂ ಮೆಡಿಕಲ್ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ.
ಕರ್ಕಿಹಳ್ಳಿಯಲ್ಲಿ ಸುಮಾರು 500 ಜನ ಹಾಗೂ ಮೆಡಿಕಲ್ ಗ್ರಾಮದಲ್ಲಿ 600ರಷ್ಟು ಜನರು ಅಸ್ವಸ್ಥರಾಗಿದ್ದು, 80 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕ್ ನಿಂದ ಪೂರೈಕೆಯಾದ ಕಲುಷಿತ ನೀರು ಸೇವಿಸಿ ಈ ಘಟನೆ ನಡೆದಿದೆ.

