1 ವರ್ಷದ ಹಿಂದೆ ನಡೆದ ಕೊಲೆ ಪ್ರಕರಣ – ಮೂವರು ಆರೋಪಿಗಳ ಬಂಧನ…!

0 0
Read Time:4 Minute, 51 Second

ಉಡುಪಿ: ನಗರದ ಸಮೀಪದ ಕರಾವಳಿ ಜಕ್ಷಂನ್ ನಲ್ಲಿ 1 ವರ್ಷದ 4 ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕನಕಪ್ಪ ಹನುಮಂತ ರೋಡಿ(46),  ಯಮನೂರ ತಿಪ್ಪಣ್ಣ ಮಾರಣ ಬಸರಿ(24), ಯಮನೂರಪ್ಪ ಜೇಡಿ,@ ರೊಡ್ಡ ಯಮನೂರಪ್ಪ (26) ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಫಿರ್ಯಾದುದಾರರಾದ ಸುರೇಶ್‌ ಕುಮಾರ್‌(57), ತಂದೆ: ದಿ|| ತಿಮ್ಮಯ್ಯ, ಕೆಳಾರ್ಕಳಬೆಟ್ಟು, ಉಡುಪಿರವರು ಸಿ.ಎಸ್‌.ಕೆ ಸೆಕ್ಯೂರಿಟಿ ಸರ್ವೀಸ್‌ ನಡೆಸಿಕೊಂಡಿದ್ದು, ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಜಂಕ್ಷನ್‌ ಬಳಿ ಇರುವ ಹೋಟೇಲ್‌ ಕರಾವಳಿ ಇದರ ಎಲ್ಲಾ ಸ್ವತ್ತುಗಳನ್ನು ಬ್ಯಾಂಕ್‌ ನವರು ಸ್ವಾಧೀನಪಡಿಸಿಕೊಂಡಿರುವುದರಿಂದ ಸದರಿ ಹೋಟೇಲ್‌ ಕಾವಲಿಗಾಗಿ ಪಿರ್ಯದುದಾರರು 2018 ನೇ ಸಾಲಿನಿಂದ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಹೀಗಿರುತ್ತಾ ಒಂದು ವಾರದ ಹಿಂದೆ ಸುಮಾರು 45 ರಿಂದ 48 ವರ್ಷ ಪ್ರಾಯದ ಓರ್ವ ವ್ಯಕ್ತಿ ಗೋಣಿ ಚೀಲ ಹಿಡಿದುಕೊಂಡು ಗುಜರಿ ಸಾಮಾನು ಕೇಳಿಕೊಂಡು ಪಿರ್ಯಾದುದಾರರಲ್ಲಿ ಬಂದಿದ್ದು, ಯಾವುದೇ ಗುಜರಿ ಸಾಮಾನು ಇರುವುದಿಲ್ಲ ಎಂದು ಪಿರ್ಯಾದುದಾರರು ಆತನನ್ನು ವಾಪಾಸು ಕಳುಹಿಸಿರುತ್ತಾರೆ. ಅದೇ ವ್ಯಕ್ತಿಯನ್ನು ದಿನಾಂಕ: 16/10/2023 ರಂದು 22:00 ಗಂಟೆಯಿಂದ ದಿನಾಂಕ:17/10/2023 ರಂದು ಬೆಳಿಗ್ಗೆ 08:30 ಗಂಟೆ ನಡುವಿನ ಸಮಯದಲ್ಲಿ ಹೋಟೇಲ್‌ ಕರಾವಳಿ ಬಳಿ ಯಾರೋ ಅಪರಿಚಿತ ವ್ಯಕ್ತಿಗಳು ಯಾವುದೋ ಕಾರಣದಿಂದ ಹರಿತವಾದ ಯಾವುದೋ ಆಯುಧದಿಂದ ಆತನ ಬಲಕೈಯನ್ನು ಕಡಿದು ಕೊಲೆ ಮಾಡಿ, ಆಯುಧವನ್ನು ಎಲ್ಲಿಯೋ ಬಿಸಾಡಿರುವುದಾಗಿ ನೀಡಿದ ಪಿರ್ಯಾದಿಯಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 152/2023 ಕಲಂ.  302, 201 ಐ.ಪಿ.ಸಿಯಂತೆ  ಪ್ರಕರಣ ದಾಖಲಾಗಿರುತ್ತದೆ. ನಂತರ ಸದ್ರಿ ಪ್ರಕರಣದ ಮೃತ ಪಟ್ಟವರನ್ನು ಕಿತ್ತೂರ @ಸಿದ್ದಪ್ಪ ಶಿವನಪ್ಪ ಹುಬ್ಬಳ್ಳಿ ಎಂಬುದಾಗಿ ಅಂದಿನ ಪಿ.ಐ, ಉಡುಪಿರವರು ತನಿಖೆ ನಡೆಸಿ ಮಾಹಿತಿ ಪಡೆದಿರುತ್ತಾರೆ.

ಉಡುಪಿ ನಗರ ಪೊಲೀಸ್‌ ಠಾಣೆಯ ಪ್ರಭಾರ ಪೊಲೀಸ್‌ ನಿರೀಕ್ಷಕರಾದ ರಾಮಚಂದ್ರ ನಾಯಕ್‌, ಉಡುಪಿ ನಗರ ಪೊಲೀಸ್ ಠಾಣೆಯ ಪಿ.ಎಸ್.‌ಐ ಈರಣ್ಣ ಶಿರಗುಂಪಿ, ಎ.ಎಸ್.ಐ  ಜಯಕರ, ಎ. ಎಸ್.‌ ಐ ಹರೀಶ, ಸಿಬ್ಬಂದಿಯವಾದ ಸುರೇಶ್‌, ಅಬ್ದುಲ್‌ ಬಶೀರ್‌ , ಸಂತೋಷ, ಸಂತೋಷ, ಹರೀಶ್, ಚೇತನ್‌, ಆನಂದ , ಹೇಮಂತ್‌ ಕುಮಾರ್‌, ಶಿವಕುಮಾರ್‌,  ಸಂತೋಷ ಮತ್ತು ಸೆನ್‌ ಪೊಲೀಸ್‌ ಠಾಣೆಯ ಪ್ರವೀಣ ಕುಮಾರ್‌, ಪ್ರವೀಣ, ಸುದೀಪ್ ರವರುಗಳ ತಂಡ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಕೊಲೆ ಪ್ರಕರಣದ ಆರೋಪಿಗಳಾದ 1) ಕನಕಪ್ಪ ಹನುಮಂತ ರೋಡಿ(46) ತಂದೆ: ಹನುಮಪ್ಪ ರೋಡಿ, ಬಿಳಕಲ್‌, ಕುಷ್ಟಗಿ, ಕೊಪ್ಪಳ ಜಿಲ್ಲೆ

 2)ಯಮನೂರ ತಿಪ್ಪಣ್ಣ ಮಾರಣ ಬಸರಿ(24), ತಂದೆ: ತಿಪ್ಪಣ್ಣ ಮಾರಣ ಬಸರಿ, ಬಿಳಕಲ್‌, ಕುಷ್ಟಗಿ, ಕೊಪ್ಪಳ ಜಿಲ್ಲೆ

3)ಯಮನೂರಪ್ಪ ಜೇಡಿ,@ ರೊಡ್ಡ ಯಮನೂರಪ್ಪ (26), ತಂದೆ: ಷಣ್ಮುಖಪ್ಪ, ಬಿಳಕಲ್‌, ಕುಷ್ಟಗಿ, ಕೊಪ್ಪಳ ಜಿಲ್ಲೆ ಎಂಬವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿರುತ್ತಾರೆ.

ಕಳೆದು ಹೋದ ಒಂದು ಬಟ್ಟೆ ವಿಚಾರದಲ್ಲಿ ಮೃತ್ತ ಕಿತ್ತೂರ @ ಸಿದ್ದಪ್ಪ ಶಿವನಪ್ಪನು 2ನೇ ಆರೋಪಿ ಯಮನೂರ ತಿಪ್ಪಣ್ಣ ಮಾರಣ ಬಸರಿಯ ಸ್ನೇಹಿತ ಚಿನ್ನು ಪಾಟೇಲ್‌ ಹುಬ್ಬಳ್ಳಿ ಎಂಬವರಿಗೆ ರಾತ್ರಿ 12.00 ಗಂಟೆಯ ಸಮಯದಲ್ಲಿ ಹಲ್ಲೆ ಮಾಡುತ್ತಿದ್ದಾಗ, ಪ್ರಶ್ನಿಸಲು ಹೋದ 2ನೇ ಆರೋಪಿಗೆ ಮೃತ್ತನು ಹಲ್ಲೆ ಮಾಡಿರುತ್ತಾನೆ. ಮೃತ್ತ  ಸಿದ್ದಪ್ಪನು ಹಲ್ಲೆ ಮಾಡಿದ ದ್ವೇಷದಿಂದ ಮರುದಿನ ಬೆಳಿಗ್ಗೆ 2ನೇ ಆರೋಪಿ ಯಮನೂರ ತಿಪ್ಪಣ್ಣ ಮಾರಣ ಬಸರಿ, ಕನಕಪ್ಪ, ಯಮನೂರಪ್ಪ ಜೇಡಿ ಮೂವರು ಸೇರಿ ಸಿದ್ದಪ್ಪನನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ಯಮನೂರ ತಿಪ್ಪಣ್ಣನು ಕೊಡಲಿಯಿಂದ ಹಲ್ಲೆ ಮಾಡಿರುತ್ತಾನೆ. ಇದರಿಂದ ಸಿದ್ದಪ್ಪನು ಮೃತ್ತ ಪಟ್ಟಿರುತ್ತಾನೆ.

ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *