ರಾಮಫಲ ಹಣ್ಣಿನಲ್ಲಿರುವ ಆರೋಗ್ಯ ಪ್ರಯೋಜನ

0 0
Read Time:1 Minute, 31 Second

ಸೀತಾಫಲ ಸಾಮಾನ್ಯವಾಗಿ ತಿಂದಿರುತ್ತೇವೆ, ಆದರೆ ರಾಮಫಲ ಅಷ್ಟಾಗಿ ದೊರೆಯುವುದಿಲ್ಲ.ಹಣ್ಣಿನ ಒಳ-ಹೊರಗಿನ ಹೋಲಿಕೆಯಲ್ಲಿ ಸೀತಾಫಲದ ಹತ್ತಿರದ ಸಂಬಂಧಿಯಂತೆ ಕಾಣುವ ಈ ಹಣ್ಣು, ಸೀತಾಫಲದ ಜಾತಿಗೇ ಸೇರಿದ್ದು. ರುಚಿ ಮತ್ತು ಘಮದಲ್ಲಿ ಎಲ್ಲರಿಗೂ ಇಷ್ಟವಾಗುವಂಥದ್ದು.

ಒಂದು ದೊಡ್ಡ ಗಾತ್ರದ ರಾಮಫಲದಲ್ಲಿ, ಅಂದಾಜು 75 ಕ್ಯಾಲರಿ ಶಕ್ತಿ, 17.5 ಗ್ರಾಂ ಪಿಷ್ಟ, 1.5 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಜೊತೆಗೆ, ನಾರು, ಕೊಬ್ಬು, ಹಲವು ಬಿ ಜೀವಸತ್ವಗಳು, ವಿಟಮಿನ್‌ ಸಿ, ಕ್ಯಾಲ್ಶಿಯಂ, ಕಬ್ಬಿಣ, ಪೊಟಾಶಿಯಂನಂಥ ಬಹಳಷ್ಟು ಬಗೆಯ ಸೂಕ್ಷ್ಮ ಪೋಷಕಾಂಶಗಳು ಇದರಲ್ಲಿವೆ. ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರದಂತೆ ನಿರ್ವಹಿಸುವ ಗುಣ ರಾಮಫಲಕ್ಕಿದೆ.

ರುಚಿಯಲ್ಲಿ ಸೀತಾಫಲಕ್ಕಿಂತ ಕೊಂಚಕಡಿಮೆ ಸಿಹಿ ಇರುವ ಇದನ್ನು ಮಧುಮೇಹಿಗಳೂ ಸೇವಿಸಬಹುದು. ಈ ಹಣ್ಣಿನಲ್ಲಿ ಸಮೃದ್ಧವಾಗಿರುವ ನಾರಿನಂಶವು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಾಂಗಗಳಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಹೆಚ್ಚಿಸಿ, ಸಮತೋಲನ ಕಾಪಾಡಲು ನೆರವಾಗುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರದಂಥ ತೊಂದರೆಗಳು ದೂರಾಗಿ, ಮಲಬದ್ಧತೆ ನಿವಾರಣೆಯಾಗುತ್ತದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *