ಕೊನೆಯ ಪಂದ್ಯಕ್ಕೆ ಆರ್​ಸಿಬಿಗೆ ಕಮ್​ಬ್ಯಾಕ್ ಆಗಲಿರುವ ಸ್ಫೋಟಕ ಬ್ಯಾಟರ್

0 0
Read Time:1 Minute, 45 Second

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿ ಅಂತಿಮ ಹಂತಕ್ಕೆ ತಲುಪುತ್ತಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್​ಗೆ ಕ್ವಾಲಿಫೈ ಆಗಿದ್ದು, ಇನ್ನೊಂದು ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯಲಿದೆ. ಪ್ಲೇ ಆಫ್​ಗೆ ಪ್ರವೇಶಿಸುವ ನಾಲ್ಕನೇ ತಂಡ ಯಾವುದು ಎಂಬುದು ನಾಳೆ ಶನಿವಾರ ನಿರ್ಧಾರವಾಗಲಿದೆ. ನಾಳೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸಿಎಸ್​ಕೆ ಗೆದ್ದರೆ ಪ್ಲೇ ಆಫ್​ಗೇರಲಿದೆ. ಆರ್​ಸಿಬಿ 18 ಕ್ಕಿಂತ ಅಧಿಕ ರನ್​ಗಳಿಂದ ಗೆದ್ದರೆ ಟಾಪ್ 4 ರಲ್ಲಿ ಸ್ಥಾನ ಪಡೆಯಲಿದೆ.ಸಾಕಷ್ಟು ಮಹತ್ವ ಪಡೆದುಕೊಂಡಿರುವ ಈ ಪಂದ್ಯಕ್ಕೂ ಮುನ್ನ ಆರ್​ಸಿಬಿ ಅಭಿಮಾನಿಗಳಿಗೆ ಶುಭಸುದ್ದಿಯೊಂದು ಸಿಕ್ಕಿದೆ. ಶನಿವಾರದ ಪಂದ್ಯದಲ್ಲಿ ಆರ್​ಸಿಬಿ ಪರ ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್​ವೆನ್ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ.ಇದಕ್ಕೆ ಕಾರಣ ಕೂಡ ಇದೆ. ಮಹತ್ವದ ಪಂದ್ಯದಲ್ಲಿ ಅಥವಾ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಈವರೆಗೆ ಮ್ಯಾಕ್ಸ್​ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ.ಹೀಗಾಗಿ ಮ್ಯಾಕ್ಸ್​ವೆಲ್ ಬಹುಮುಖ್ಯ ಪಾತ್ರವಹಿಸಲಿದ್ದಾರೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್​ಗೆ ಮ್ಯಾಕ್ಸಿ ಕಮ್​ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *